ಸ್ಯಾನ್ ಥೋಮ್ ಚರ್ಚ್ ಅಥವಾ ಸೇಂಟ್ ಥಾಮಸ್ ಕಥೀಡ್ರಲ್ ಬಸಿಲಿಕಾ ಭಾರತದ ತಮಿಳುನಾಡು ರಾಜ್ಯದ ಮದ್ರಾಸ್ (ಚೆನ್ನೈ) ನ ಸ್ಯಾನ್‍ಥೋಮ್ ಪ್ರದೇಶದಲ್ಲಿರುವ ಒಂದು ಸಣ್ಣ ಬಸಿಲಿಕಾ. ಪ್ರಸ್ತುತ ರಚನೆಯು ಕ್ರಿ.ಪೂ. 1523 ರ ಕಾಲದ್ದು. ಇದನ್ನು ಪೋರ್ಚುಗೀಸರು ಹನ್ನೆರಡು ಯೇಸುದೂತರಲ್ಲಿ ಒಬ್ಬನಾದ ಥಾಮಸ್‍ನ ಸಮಾಧಿಯ ಮೇಲೆ ಪುನರ್ನಿರ್ಮಿಸಿದರು. 1896 ರಲ್ಲಿ, ಇದನ್ನು ಮದ್ರಾಸ್ ಪ್ರಾಂತ್ಯದಲ್ಲಿ ನವ-ಗಾಥಿಕ್ ವಿನ್ಯಾಸಗಳ ಪ್ರಕಾರ ನವೀಕರಿಸಲಾಯಿತು. ಪುರಾತನ ಕ್ರಿಶ್ಚಿಯನ್ ಧರ್ಮದ ಏಸುದೂತರ ಯುಗದ ಮೂರು ಚರ್ಚುಗಳಲ್ಲಿ ಇದು ಒಂದಾಗಿದೆ ಮತ್ತು ಒಬ್ಬ ಏಸುದೂತನ ಸಮಾಧಿಗೆ ನೆಲೆಯಾಗಿರುವುದಕ್ಕೆ ಹೆಸರುವಾಸಿಯಾಗಿದೆ ಮತ್ತು ಇಂದಿಗೂ ಜಗತ್ತಿನಲ್ಲಿ ನಿಂತಿದೆ. == ವಾಸ್ತುಕಲೆ == ಸ್ಯಾನ್‍ಥೋಮ್ ಚರ್ಚನ್ನು ಗಾಥಿಕ್ ಪುನರುಜ್ಜೀವನದ ವಾಸ್ತುಕಲಾ ಶೈಲಿಯಲ್ಲಿ ನಿರ್ಮಿಸಲಾಗಿದೆ. ಚರ್ಚ್ ತೇಗದ ಮರದಿಂದ ನಿರ್ಮಿಸಿದ ರಿಬ್ ವಾಲ್ಟ್ ಛಾವಣಿಯನ್ನು ಹೊಂದಿದೆ. ಇದನ್ನು 16 ಕಿಟಕಿಗಳು ಮತ್ತು 34 ಬಣ್ಣದ ಗಾಜಿನಿಂದ ನಿರ್ಮಿಸಲಾಗಿದೆ. ಕಥೀಡ್ರಲ್ಲನ್ನು ತೇಗದ ಮರ, ಅಮೃತಶಿಲೆ ಮತ್ತು ಗ್ರಾನೈಟ್‌ನಿಂದ ನಿರ್ಮಿಸಲಾಗಿದೆ. ಈ ಚರ್ಚ್‌ನಲ್ಲಿ ಎರಡು ಮಿನಾರುಗಳಿವೆ: ಮೊದಲ ಮಿನಾರು: ಇದು ಚರ್ಚ್‌ನ ಎಡಭಾಗದಲ್ಲಿ ಗಂಟೆ ಗೋಪುರವಾಗಿ ಕಾರ್ಯನಿರ್ವಹಿಸುತ್ತದೆ. ಇದು 147 ಅಡಿ ಎತ್ತರವಾಗಿದೆ ಮತ್ತು ಇದನ್ನು ದೂರದಿಂದಲೂ ನೋಡಬಹುದು. ಎರಡನೇ ಮಿನಾರು: ಏಸುದೂತ ಸೇಂಟ್ ಥಾಮಸ್‍ನ ಸಮಾಧಿಯನ್ನು ಸೂಚಿಸಲು ಕಥೀಡ್ರಲ್‌ನ ಮಧ್ಯದಲ್ಲಿ ನಿರ್ಮಿಸಲಾಗಿದೆ. 200 ವರ್ಷಗಳಷ್ಟು ಹಳೆಯದಾದ ಬ್ರಿಟಿಷ್ ಪೈಪ್ ಆರ್ಗನ್ನನ್ನು ಚರ್ಚ್‌ನ ಮಹಡಿಯಲ್ಲಿ ಇರಿಸಲಾಗಿದೆ. ಸಂದರ್ಶಕರು ಚರ್ಚ್‌ನ ನಾರ್ತೆಕ್ಸ್‌ನಲ್ಲಿರುವ ಮೆಟ್ಟಿಲುಗಳನ್ನು ಏರುವ ಮೂಲಕ ಪೈಪ್ ಆರ್ಗನ್ನನ್ನು ನೋಡಬಹುದು. === ಅವರ್ ಲೇಡಿ ಆಫ್ ಮೈಲಾಪುರ್ === ಮೇರಿ ಮಾತೆಯ ಪೋರ್ಚುಗೀಸ್ ಪ್ರತಿಮೆಯನ್ನು 1523 ರಲ್ಲಿ ಲಿಸ್ಬನ್‌ನಿಂದ ಸ್ಯಾನ್‍ಥೋಮ್ ಚರ್ಚ್‌ಗೆ ತರಲಾಯಿತು ಮತ್ತು ಈಗ ಅದನ್ನು ಚರ್ಚ್‌ನ ಬಲಿಪೀಠದ ಎಡಭಾಗದಲ್ಲಿ ಇರಿಸಲಾಗಿದೆ. ಸಂತ ಮೇರಿಯ ಮರದ ಪ್ರತಿಮೆಯನ್ನು ಚಿನ್ನದ ಬಣ್ಣದಿಂದ ಲೇಪಿಸಲಾಗಿದೆ ಮತ್ತು ಒಂದು ವಿಶೇಷ ಬಲಿಪೀಠದ ಮೇಲೆ ಇರಿಸಲಾಗಿದೆ. === ಸೇಂಟ್ ಥಾಮಸ್‍ನ ಕಂಬ === ದಡಕ್ಕೆ ತೇಲಿಕೊಂಡು ಬಂದ ಕಟ್ಟಿಗೆಯಿಂದ ನಿರ್ಮಿಸಲಾದ ಈ ಕಂಬವನ್ನು ಏಸುದೂತ ಸೇಂಟ್ ಥಾಮಸ್ ಸ್ಥಾಪಿಸಿದನೆಂದು ನಂಬಲಾಗಿದೆ. == ಸ್ಯಾನ್‍ಥೋಮ್ ವಸ್ತುಸಂಗ್ರಹಾಲಯ == ಚರ್ಚ್‌ಗೆ ಹೊಂದಿಕೊಂಡ ಒಂದು ವಸ್ತುಸಂಗ್ರಹಾಲಯವಿದ್ದು ಇದು ಏಸುದೂತ ಸೇಂಟ್ ಥಾಮಸ್‍ ಮತ್ತು ಸ್ಯಾನ್‍ಥೋಮ್ ಚರ್ಚ್ ಮತ್ತು ಸಮಾಧಿಗೆ ಸೇರಿದ ಐತಿಹಾಸಿಕ ವಸ್ತುಗಳನ್ನು ಹೊಂದಿದೆ. ಇದು 7-8 ನೇ ಶತಮಾನದ ಅತ್ಯಂತ ಹಳೆಯ ಶಿಲುಬೆ ಮತ್ತು ಶಾಸನವನ್ನು ಹೊಂದಿದೆ. ಇದು ಸ್ಯಾನ್‍ಥೋಮ್ ಚರ್ಚ್‌ನ ಹಿಂಭಾಗದಲ್ಲಿದೆ. ಮ್ಯೂಸಿಯಮ್‍ನಲ್ಲಿ ಏಸುದೂತ ಸೇಂಟ್ ಥಾಮಸ್, ಸೇಂಟ್ ಥಾಮಸ್‍ನ ಸಮಾಧಿ ಮತ್ತು ಸ್ಯಾನ್‍ಥೋಮ್ ಚರ್ಚ್ ಮತ್ತು ಹೆಚ್ಚಿನವುಗಳ ಬಗ್ಗೆ ಮಾಹಿತಿ ಕೇಂದ್ರವಿದೆ. == ಛಾಯಾಂಕಣ == == ವರ್ಣರಂಜಿತ ಗಾಜು == == ಉಲ್ಲೇಖಗಳು == == ಹೊರಗಿನ ಕೊಂಡಿಗಳು == 2022-05-28 ವೇಬ್ಯಾಕ್ ಮೆಷಿನ್ ನಲ್ಲಿ. 2023-04-18 ವೇಬ್ಯಾಕ್ ಮೆಷಿನ್ ನಲ್ಲಿ.